ಮಲೆಯಾಳಂ ಹಾಗೂ ಕನ್ನಡ ಸಿನಿಮಾರಂಗದ ಖ್ಯಾತ ನಟಿ ಭಾವನಾ ಇಂದು ನಿರ್ಮಾಪಕ ನವೀನ್ ಜೊತೆಯಲ್ಲಿ ಸಪ್ತಪದಿ ತುಳಿದಿದ್ದಾರೆ. ಗಣೇಶ್ ಅಭಿನಯದ ರೋಮಿಯೋ ಸಿನಿಮಾದಲ್ಲಿ ಭಾವನಾ ಅಭಿನಯಿಸಿದ್ದರು. ಆ ಸಮಯದಲ್ಲಿ ನವೀನ್ ಅವರ ಪರಿಚಯವಾಗಿತ್ತು. ಸುಮಾರು ಆರು ವರ್ಷಗಳಿಂದ ಪ್ರೇಮಿಗಳಾಗಿದ್ದ ನವೀನ್ ಹಾಗೂ ಭಾವನಾ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟಿದ್ದಾರೆ.
ಭಾವನಾ ಕೇರಳಾ ಮೂಲದವರು ಆಗಿರುವುದರಿಂದ ತ್ರಿಶೂರ್ ನಲ್ಲಿರುವ ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಮದುವೆಯ ಮಹೂರ್ತ ನಡೆದಿದೆ. ಸರಳವಾಗಿ ವಿವಾಹವನ್ನು ಮಾಡಿಕೊಂಡಿರುವ ಈ ಜೋಡಿ ಮಲೆಯಾಳಂ ಚಿತ್ರೋದ್ಯಮದ ಸ್ನೇಹಿತರಿಗೆ ಮತ್ತು ಗಣ್ಯರಿಗಾಗಿ ಆರತಕ್ಷತೆಯನ್ನೂ ಆಯೋಜನೆ ಮಾಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾವನಾ ಮದುವೆಗಾಗಿ ಹೇಗೆ ಸಿಂಗಾರ ಮಾಡಿಕೊಂಡಿದ್ದರು? ಖ್ಯಾತ ನಟಿಯ ಮದುವೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು? ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕು ಎಂದರೆ ಈ ವಿಡಿಯೋ ನೋಡಿ !
Kannada and Malayalam Actress Bhavana got married today (Jan 22nd) to her longtime friend, Producer Naveen at Sri Krishna Temple in Kerala.